Sunday 26 February 2017

*"KCSR ಪ್ರಕಾರ ರಜೆ ನಿಯಮಗಳು"*

*"KCSR ಪ್ರಕಾರ ರಜೆ ನಿಯಮಗಳು"*


















- Kiran Raghupathi, VP, KSPSTA

👆"ದತ್ತು ಮಗು ರಜೆ"

👆"ಸಾಂದರ್ಭಿಕ ರಜೆ"

👆"ಇಲಾಖಾ ಪರೀಕ್ಷೆ ರಜೆ"

👆"ಹುಚ್ಚು ಪ್ರಾಣಿ ಕಡಿತಕ್ಕೆ ರಜೆ"

👆"ಗಳಿಕೆ ರಜೆ ಲೆಕ್ಕಾಚಾರ"

👆"ಗಳಿಕೆ ರಜೆ"

👆"ಅಸಾಧಾರಣ ರಜೆ" -> 2

👆"ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆ ರಜೆ"

👆"ಅರ್ಧ ವೇತನ ರಜೆ & ಪರಿವರ್ತಿತ ರಜೆ"

👆"ಅರ್ಧ ವೇತನ ರಜೆ"

👆"ರಜೆಯ ನಿಯಮಗಳು & ಗರಿಷ್ಠ ಮಿತಿ" -> 2

👆"ಹೆರಿಗೆ ರಜೆ & ಪಿತೃತ್ವ ರಜೆ"

👆"ಪಿತೃತ್ವ ರಜೆ"

👆"CL ಮತ್ತು RH ಸಂಯೋಜಿಸಿ ರಜೆ"

Health is wealth-2

*ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ*

ಮನುಷ್ಯನ ದೇಹಕ್ಕಿಂತ ಬೇರೊಂದು ವಿಸ್ಮಯ ಇಲ್ಲ. ಈ ವಿಸ್ಮಯದ ಬಗ್ಗೆ ಕೆಲವೊಂದು ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ದೇಹ ನೀವು ಅನ್ಕೊಂಡಿರೋದಕ್ಕಿಂತ ಹೆಚ್ಚು ಸಾಧಿಸತ್ತೆ, ನೀವು ಹೇಳಿದಂಗೆ ಕೇಳುತ್ತೆ.

ಇಲ್ಲಿ ಅಂತೆಕಂತೆ ನಿಮಗೋಸ್ಕರ ಒಂದಿಷ್ಟು ದಿನ ನಿತ್ಯ ಬರೋ ತೊಂದ್ರೆಗಳಿಗೆ ಸಿಂಪಲ್ ಉಪಾಯಗಳನ್ನ ಕೊಟ್ಟಿದೆ.

*1. ಗಂಟಲಲ್ಲಿ ಕೆರೆತ ಇದ್ದಾಗ ಕಿವಿ ಕೆರ್ಕೊಳ್ಳಿ*

ಸರಿ ಹೋಗುತ್ತೆ. ಯಾಕಂದ್ರೆ ಆ ಕೆರೆತ ಉಂಟು ಮಾಡಿರೋ ನರಗಳು ಸಡಿಲವಾಗತ್ತೆ.


*2. ಮಾತು ಸರ್ಯಾಗಿ ಕೇಳಿಸ್ತಿಲ್ಲಾ ಅಂದ್ರೆ ಬಲಗಡೆ ಕಿವಿ ಕೊಟ್ಟು ಕೇಳಿ, ಸಂಗೀತಕ್ಕೆ ಎಡಗಡೆ ಕಿವಿ*

 ಬಲಗಡೆ ಕಿವಿಗೆ ಶಬ್ದ ಮತ್ತೆ ವಾಕ್ಯಗಳನ್ನ ಗ್ರಹಿಸೋ ಶಕ್ತಿ ಜಾಸ್ತಿ ಇದ್ಯಂತೆ. ಹಾಗೆ ಎಡಗಡೆ ಕಿವಿಗೆ ರಾಗ, ಲಯಗಳನ್ನ ಗ್ರಹಿಸೋ ಶಕ್ತಿ ಇದೆ.


*3. ಇಂಜೆಕ್ಷನ್ ಭಯಾ ಆದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮಿ*

ಇಂಜೆಕ್ಷನ್ ನೋವಿನ ಭಯ ಕಾಡಿದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮೊ ಅಭ್ಯಾಸ ಮಾಡ್ಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ರಕ್ತದೊತ್ತಡ ಹೆಚ್ಚಾಗಿ ಬೆನ್ನು ಹುರಿಯಲ್ಲಿರೋ ನರಗಳಿಗೆ ನೋವು ಗೊತ್ತಾಗದೇರೋ ಹಾಗೆ ಮಾಡುತ್ತೆ.


*4. ಮೂಗು ಕಟ್ಟಿದ್ರೆ ನಾಲಿಗೇನಾ ಬಾಯಿಯೊಳಗಡೆ ಮೇಲ್ಭಾಗಕ್ಕೆ ಮುಟ್ಟಿಸಿ ಅಮೇಲೆ ಹುಬ್ಬು ಮಧ್ಯ ಒತ್ತಿ*

ಹೀಗೆ ಒಂದಾದ ಮೇಲೆ ಒಂದನ್ನ ಮಾಡಿದ್ರೆ ಇಪ್ಪತ್ತು ಸೆಕೆಂಡಲ್ಲೇ ನಿಮ್ಮ ಮೂಗು ಸರಿ ಹೋಗುತ್ತೆ.


*5.  ಇನ್ನೇನು ಮಲಗೋ ಹೊತ್ತಲ್ಲಿ ಹೆಚ್ಚು ತಿಂದು ಒದ್ದಾಡ್ತಿದ್ರೆ ಎಡಕ್ಕ ತಿರುಗಿ ಮಲಗಿ*

ಇದರಿಂದ ನಿಮ್ಮ ಹೊಟ್ಟೇಲಿ ಆಸಿಡ್ ಉತ್ಪತ್ತಿ ಚೆನ್ನಾಗಿ ಆಗಿ ಜೀರ್ಣ ಚೆನ್ನಾಗಾಗುತ್ತೆ.

*6. ಹಲ್ಲು ನೋವು ಕಮ್ಮಿ ಮಾಡ್ಕೊಳಕ್ಕೆ ಹೆಬ್ಬೆಟ್ಟು ಮತ್ತೆ ತೊರ್ಬೆರಳಿನ ಮಧ್ಯೆ  ಐಸ್ ಇಟ್ಟು ಉಜ್ಜಿ*

ನಿಮ್ಮ ಹಲ್ಲಿನ ಡಾಕ್ಟರ್ ಸಿಗ್ಲಿಲ್ಲ ಅಂದ್ರೆ ಹಿಂಗೆ ಮಾಡಿ, ನಿಮ್ಮ ನೋವು ಅರ್ಧಕ್ಕೆ ಬರುತ್ತೆ.


*7. ಮೂಗಲ್ಲಿ ರಕ್ತ ಬರ್ತಿದ್ರೆ ಮೂಗು ಮತ್ತೆ ತುಟಿ ಸೇರೋ ಜಾಗದಲ್ಲಿ ಒತ್ತಿ ಹಿಡಿರಿ*

ಮೂಗಿಗೆ ಹೋಗೊ ರಕ್ತನಾಳನ ತಡೆಗಟ್ಟಿದಹಾಗೆ ಆಗೋದ್ರಿಂದ ರಕ್ತ ಬರೋದು ನಿಲ್ಲುತ್ತೆ.


*8. ಸುಟ್ಟ ಗಾಯಕ್ಕೆ ತಣ್ಣೀರೇ ಮದ್ದು*

ಅದೇ ಹಳೆ ಉಪಾಯ ಸಹಾಯ ಮಾಡುತ್ತೆ.


*9. ನಿಮಗೆ ತುಂಬಾ ಭಯ ಆದಾಗ ಹೆಬ್ಬೆಟ್ಟು ಊದ್ಕೊಳಿ*

ಹೀಗೆ ಮಾಡೋದ್ರಿಂದ ರಕ್ತದೊತ್ತಡ ಕಡಿಮೆ ಆಗಿ ಭಯ ಆಗೋದಿಲ್ಲ.

*10. ಐಸ್ ಕೋಲ್ಡ್ ತಿಂದು ತಲೆಯೆಲ್ಲಾ ಕೋಲ್ಡ್ ಆಗ್ತಿದ್ರೆ ನಾಲಿಗೆಯಿಂದ ಬಾಯಿ ಮೇಲ್ಭಾಗಾನ ಒತ್ತಿಟ್ಟುಕೊಳ್ಳಿ*

ಬೇಸಿಗೇಲಿ ಅಥವಾ ತುಂಬ ಬಿಸಿಲಿದ್ದಾಗ ನೀವು ತಣ್ಣಗಿರೋ ಐಸ್ ಕ್ರೀಂ ಅಥವಾ ಜ್ಯುಸ್ ಕುಡಿದ್ರೆ ಹೀಗಾಗುತ್ತೆ. ಇದು ಮುಂದುವರೆದ್ರೆ ನಿಮ್ಮ ಮೈ ಬಿಸಿಯಾಗಿ ತಲೆನೋವು ಬರಬಹುದು. ಇದರಿಂದ ಪಾರಾಗೋಕೆ ನಿಮ್ಮ ನಾಲಿಗೆಯಿಂದ ಬಾಯಿಯ ಮೇಲಿನ ಭಾಗಾನ ಒತ್ತಿಟ್ಟುಕೊಳ್ಳಿ.


*11. ನಿಮ್ಮ ಕೈ ಸೋತಿದ್ರೆ ಕತ್ತಾಡಿಸಿ*

ನಿಮ್ಮ ಕೈಗಳು ಎತ್ತೋಕಾಗದೆ ಸೋತಿದ್ರೆ ಆಗ ನಿಮ್ಮ ಕೈಗಳ ನರದಲ್ಲಿ ತಡೆಯಾಗಿದೆ ಅಂತರ್ಥ. ಆಗ ನಿಮ್ಮ ಕುತ್ತಿಗೆ ಹೀಗೆ ಆಡಿಸಿದ್ರೆ ಅವು ಸಡಿಲ ಆಗುತ್ವೆ.


*12. ಬೇಗ ನಿದ್ದೆ ಮಾಡೋಕೆ ಏನು ಮಾಡಬೇಕು ಗೊತ್ತಾ?*

ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಇಂದ ಹೊರ ಬಂದ್ರೆ ಮತ್ತೆ ಮಲಗೋ ವರೆಗೂ ಹಾಸಿಗೆಗೆ ಹೋಗಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಾಸಿಗೆಗೆ ತಲೆ ಕೊಟ್ಟ ತಕ್ಷಣ ಮಲಗೋ ಅಭ್ಯಾಸ ಆಗುತ್ತೆ.


*13. ಬೇಗ ಏನನ್ನಾದ್ರೂ ನೆನಪಿಟ್ಟುಕೊಳ್ಳೋಕೆ ಹೀಗೆ ಮಾಡಿ*

ಬೇಗ ನೆನಪಿಟ್ಟಿ ಕೊಳ್ಳಬೇಕು ಅದೂ ತುಂಬಾ ದಿನಗಳವರೆಗೆ ಅಂತಿದ್ರೆ ರಾತ್ರಿ ಮಲಗೋ ಹೊತ್ತಲ್ಲಿ ಆ ವಿಷಯದ ಬಗ್ಗೆ ಆಲೋಚಿಸಿ, ಆಗ ನಿಮ್ಮ ಮೆದುಳು ಅದನ್ನ ಸುಲಭವಾಗಿ ಮರೆಯಲ್ಲ.


*14. ಓಡೋವಾಗ ನಿಮ್ಮ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡಿ*

ಇದ್ರಿಂದ ನಿಮ್ಮ ದೇಹದ ಎಡಭಾಗಕ್ಕೆ ನೋವಾಗಲ್ಲ. ನಿಮ್ಮ ಲಿವೆರ್ ಒತ್ತಡ ಹೇರೋದ್ರಿಂದ ಓಡೋವಾಗ ದೇಹದ ಎಡಭಾಗಕ್ಕೆ ನೋವಾಗೋದು. ಇದನ್ನ ತಡೆಯೋಕೆ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡ್ಬೇಕು


*15. ಈಜೋಕೆ ನೀರಿಗೆ ಜಿಗಿದಾಗ ತುಂಬ ಆಳಕ್ಕೆ ಇಳಿಬೇಕು ಅಂದ್ರೆ ಮುಂಚೇನೆ ಕೆಲವು ಬಾರಿ ಬೇಗ ಉಸಿರಾಡಿ*

ನೀರಿಗೆ ಜಿಗಿಯೋಕೆ ಮುಂಚೆ ಕೆಲವು ಬಾರಿ ಬೇಗ ಉಸಿರಾಡಿ ಹೇಗೆ ಮಾಡೋದ್ರಿಂದ ನಿಮಗೆ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳೋಕೆ ಸಾಧ್ಯ ಆಗುತ್ತೆ. ಆಗ ನೀವು ಆಳಕ್ಕೆ ಜಿಗಿಬಹುದು.


ಏನು ಆಶ್ಚರ್ಯ ಆಗ್ತಿದ್ಯಾ? ವಿಚಿತ್ರ ಅನ್ಸಿದ್ರೂ ಇವೆಲ್ಲ ನಿಜಾ... ಬೇಕಾದ್ರೆ ಟ್ರೈ ಮಾಡಿ ನೋಡಿ

Computer literacy test

*ಸರ್ಕಾರಿ ನೌಕರರಿಗೆ ‘ಕಂಪ್ಯೂಟರ್’ ಕಡ್ಡಾಯ*

12 Dec, 2016
ಪ್ರಜಾವಾಣಿ
*Mallikarjun Hulasur*

*ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಲೇ ಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಿ ನೌಕರರಿಗೆ ಬಂದೊದಗಿದೆ. ಈ ಪರೀಕ್ಷೆ ಪಾಸು ಮಾಡದೇ ಇದ್ದಲ್ಲಿ ದಿನಾಂಕ  7.3.2018ರ ನಂತರ ವಾರ್ಷಿಕ ವೇತನ ಬಡ್ತಿಗೆ ಅರ್ಹರಿರುವುದಿಲ್ಲವೆಂದು ಐದು ವರ್ಷಗಳ ಹಿಂದೆಯೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಯಾರೆಲ್ಲ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಯಾರಿಗೆ ವಿನಾಯಿತಿ ಇದೆ, ಪರೀಕ್ಷೆ ಎಲ್ಲಿ ಹೇಗೆ ಬರೆಯಬೇಕೆಂಬ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಈ ಲೇಖನ.*

*ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳನ್ನು 7.3.2012ರಲ್ಲಿಯೇ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಂತೆ ಈ ನಿಯಮಗಳ ಅನ್ವಯ ದಿನಾಂಕ 7.3.2012ರ ನಂತರ ನೇರ ನೇಮಕಾತಿ ಹೊಂದಿದ ಸರ್ಕಾರಿ ನೌಕರರು ಐದು ವರ್ಷಗಳೊಳಗೆ (7.3.2017ರೊಳಗೆ) ಹಾಗೂ ಮುಂದಿನ ವಾರ್ಷಿಕ ವೇತನ ಬಡ್ತಿಗೆ ಆರು ವರ್ಷದ ಅವಧಿಯೊಳಗೆ ಅಂದರೆ (7.3.2018ರವರೆಗೆ)  ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೇರ್ಗಡೆ ಹೊಂದಲು ಅವಕಾಶ ನೀಡಲಾಗಿದೆ.*

*ಅದರಂತೆ ಈ ಅಧಿಸೂಚನೆ ಹೊರಡಿಸಿದ ನಂತರ (ಅಂದರೆ 7.3.2012ರ ನಂತರ) ನೇಮಕಾತಿ ಹೊಂದಿದ  ಅಧಿಕಾರಿಗಳು, ನೌಕರರು ಶೇ. 60ರಷ್ಟು, ಅಂದರೆ 48 ಅಂಕಗಳನ್ನು ಹಾಗೂ 7.3.2012ಕ್ಕೂ ಮೊದಲೇ ಸೇವೆಯಲ್ಲಿರುವ ಅಧಿಕಾರಿಗಳು, ನೌಕರರು ಶೇ. 35ರಷ್ಟು, ಅಂದರೆ 28 ಅಂಕಗಳಿಗೆ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿರುತ್ತದೆ. ಆದ್ದರಿಂದ ಎಲ್ಲ ಅಧಿಕಾರಿಗಳು ನೌಕರರು ಸದರಿ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಯಾವುದೇ ಮುಂಬಡ್ತಿ ಅಥವಾ ವಾರ್ಷಿಕ ಬಡ್ತಿ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.*

*ಯಾರಿಗೆ ಈ ಪರೀಕ್ಷೆಯಿಂದ ವಿನಾಯಿತಿ? *

*ವಾಹನಚಾಲಕರು, ಪ್ರಾಥಮಿಕ ಶಾಲಾಶಿಕ್ಷಕರು, ಪೊಲೀಸ್ ಕಾನ್‌ಸ್ಟೆಬಲ್‌ಗಳು, ನರ್ಸ್‌ಗಳು, ರೇಷ್ಮೆಪ್ರದರ್ಶಕರು, ಅರಣ್ಯ ರಕ್ಷಕರು, ಅಬಕಾರಿರಕ್ಷಕರು, ಆರೋಗ್ಯಕಾರ್ಯಕರ್ತರು, ಅರಣ್ಯವೀಕ್ಷಕರು, ಬೆಲೀಫ್‌ಗಳು ಮತ್ತು ಪ್ರೊಸೆಸರ್‌ಗಳು ಸರ್ವರ್‌ಗಳು ಮತ್ತು ಡಿ ಗುಂಪಿನ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ.*

*ಪ್ರೋತ್ಸಾಹಧನ*

*ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡಿ ಅನುಮೋದಿತ ಎಜೆನ್ಸಿಯಿಂದ ನೀಡುವ ಪ್ರಮಾಣಪತ್ರವನ್ನು ಹಾಜರು ಪಡಿಸಿದ ಪ್ರತಿಯೊಬ್ಬ ನೌಕರನಿಗೂ ಐದು ಸಾವಿರ ರೂಪಾಯಿಗಳ ಪ್ರೋತ್ಸಾಹಧನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಬ್ಬ ನೌಕರನು ಒಮ್ಮೆ ಈ ಪರೀಕ್ಷೆಯನ್ನು ಪಾಸು ಮಾಡಿದ ನಂತರ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗುವ ಆವಶ್ಯಕತೆಯಿಲ್ಲ.*

*ಪರೀಕ್ಷೆಗೆ ಹಾಜರಾಗುವ ವಿಧಾನ:*

*ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಕಿಯೋನಿಕ್ಸ್ ಸಂಸ್ಥೆಗೆ ನೀಡಿದೆ. http://clt.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಬೇಕು. (ಗೂಗಲ್‌ನಲ್ಲಿ KEONICS ಎಂದು ಟೈಪಿಸಿದರೂ ಈ ವೆಬ್‌ಸೈಟ್‌ನ ವಿವರಗಳು ಕಾಣಿಸಿಕೊಳ್ಳುತ್ತವೆ.) ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಅರ್ಹ ವೈಯಕ್ತಿಕ ಇ-ಮೇಲ್ ಮತ್ತು ಮೊಬ್ಯೆಲ್ ಸಂಖ್ಯೆಯನ್ನು ಹೊಂದಿರಬೇಕು ಮತ್ತು ಪರೀಕ್ಷೆ ಹಾಗೂ ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣವಾಗುವವರೆಗೂ ಅದನ್ನು ಸಕ್ರಿಯವಾಗಿಡಬೇಕು.*

*ವೆಬ್‌ಪೇಜ್‌ ತೆಗೆದ ನಂತರ ನೋಂದಣಿ ಎಂಬುದರ ಮೇಲೆ ಕ್ಲಿಕ್ ಮಾಡಿ ಅಭ್ಯರ್ಥಿಯ ಕೆ.ಜಿ.ಐ.ಡಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ಎಂಟ್ರಿ ಮಾಡಿ ಸಬ್‌ಮಿಟ್ ಮಾಡಬೇಕು ಮತ್ತು ಅಭ್ಯರ್ಥಿಯು ಪಾಸ್‌ಪೋರ್ಟ್ ಸೈಜಿನ ಭಾವಚಿತ್ರ, (ಗರಿಷ್ಠ ಸೈಜ್: 50 ಕೆ.ಬಿ., ಕನಿಷ್ಠ ಸೈಜ್: 10 ಕೆ.ಬಿ.) ಹಾಗೂ ಆಭ್ಯರ್ಥಿಯ ಸಹಿ (20ಕೆ.ಬಿ)ಯನ್ನು ಅಪ್‌ಲೋಡ್ ಮಾಡಬೇಕು.

*ಅನಂತರ ಮೇಲ್ ಐಡಿಗೆ ಯುಸರ್ ಐ.ಡಿ. ಮತ್ತು ಪಾಸ್ವರ್ಡ್ ಬರುತ್ತದೆ ಇದನ್ನು ಬಳಸಿ ಪರೀಕ್ಷೆಯ ಪ್ರವೇಶಪತ್ರ ವನ್ನು ಪಡೆದುಕೊಳ್ಳಬಹುದು. ಪ್ರತಿ ಶನಿವಾರ ಮತ್ತು ಭಾನುವಾರ ನಿಗದಿ ಪಡಿಸಿದ ಪರೀಕ್ಷಾಕೇಂದ್ರದಲ್ಲಿ 80 ಅಂಕದ 90 ನಿಮಿಷದ ಪರೀಕ್ಷೆ ನಡೆಯುತ್ತದೆ. *ಪ್ರತಿ ಶನಿವಾರ ಹಾಗೂ ಭಾನುವಾರ ನಾಲ್ಕು ಬ್ಯಾಚ್‌ಗಳಲ್ಲಿ ಪರೀಕ್ಷೆ ನಡೆಯುತ್ತದೆ. (ಎರಡನೇ ಶನಿವಾರ ಪರೀಕ್ಷೆ ನಡೆಯುವುದಿಲ್ಲ.) ನಿಮಗೆ ಬೇಕಾದ ದಿನಾಂಕ ಹಾಗೂ ಬ್ಯಾಚನ್ನು ಆಯ್ಕೆ ಮಾಡಿಕೊಳ್ಳಬಹುದು.*

*ಈ ಪರೀಕ್ಷೆ ಬರೆಯಲು ಒ.ಒ.ಡಿ. ಸೌಲಭ್ಯವಿರುತ್ತದೆ.ಮೊದಲ ಬಾರಿಗೆ ಪರೀಕ್ಷಾಶುಲ್ಕ ಇರುವುದಿಲ್ಲ. ನಂತರದ ಪ್ರತಿಯೊಂದು ಪ್ರಯತ್ನಕ್ಕೂ 300 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕು. ಈ ಸಂಬಂಧ ಯಾವುದಾದರೂ ದೂರುಗಳಿದ್ದರೆ ಇದೇ ವೆಬ್ ಸೈಟ್‌ಗೆ ಲಾಗಿನ್ ಆಗಿ ದೂರನ್ನು ದಾಖಲಿಸಬಹುದು. ಪರೀಕ್ಷಾಕೇಂದ್ರದ ದಿನಾಂಕ, ಸಮಯವನ್ನು ಕಾಯ್ದಿರಿಸಿ ಮತ್ತು ನೋಂದಾಯಿಸಿದ ನಂತರ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಬೇಕು. ಪರೀಕ್ಷೆಗೆ ಹಾಜರಿರುವ ದಿನದಂದು ಯಾವುದಾದರೂ ಮೂಲ ಗುರುತಿನ ಪತ್ರವನ್ನು ಹಾಜರು ಪಡಿಸಬೇಕು. ಉದಾ: ಆಧಾರ್ ಕಾರ್ಡ್, ವೋಟರ್ ಐ.ಡಿ. ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್, ಪಾನ್ ಕಾರ್ಡ್.*

*ಪರೀಕ್ಷಾ ಪಠ್ಯಕ್ರಮ*

*ಎಂ.ಎಸ್. ವರ್ಡ್, ಎಂ.ಎಸ್. ಎಕ್ಸೆಲ್, ಎಂ.ಎಸ್. ಪವರ್ ಪಾಯಿಂಟ್, ನುಡಿ, ಇ-ಮೇಲ್, ಹಾಗೂ ಕಂಪ್ಯೂಟರ್ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಪರೀಕ್ಷೆಯು ಇಂಗ್ಲಿಷ್ ಮತ್ತು ಕನ್ನಡಭಾಷೆಯಲ್ಲಿ ನಡೆಸಲಾಗುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕವಿದ್ದು, ತಪ್ಪು ಉತ್ತರಕ್ಕೆ ಯಾವುದೇ ಅಂಕವನ್ನು ಕಡಿತ ಮಾಡುವುದಿಲ್ಲ.  ಪರೀಕ್ಷೆ ಮುಗಿದ ಬಳಿಕ ನಿಮಗೆ ಲಭಿಸಿರುವ ಅಂಕದ ವಿವರವು ನಿಮಗೆ ತಕ್ಷಣ ತಿಳಿಯುತ್ತದೆ.*
*ಮಲ್ಲಿಕಾರ್ಜುನ ಹುಲಸೂರ*

*ಪರೀಕ್ಷಾ ಕೇಂದ್ರಗಳು*

*ಬೆಂಗಳೂರು 280, ರಾಮನಗರ 20, ದಾವಣಗೆರೆ 50, ಮೈಸೂರು 125, ಶಿವಮೊಗ್ಗ 50, ಹುಬ್ಬಳ್ಳಿ 50, ಮಂಡ್ಯ 30, ಕಲಬುರ್ಗಿ 40, ಬೆಳಗಾವಿ 60, ಮಂಗಳೂರು 30,  ಯಾದಗಿರಿ 20, ಬೀದರ್ 30 ಹಾಗೂ ರಾಯಚೂರಿನಲ್ಲಿ 30 ಪರೀಕ್ಷಾ ಕೇಂದ್ರಗಳಿವೆ. ನಮಗೆ ಬೇಕಾದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು*.

*ನನಗೆ ಕಂಪ್ಯೂಟರ್ ಜ್ಞಾನವಿಲ್ಲ, ಪರೀಕ್ಷೆಯನ್ನು ಹೇಗೆ ಎದುರಿಸುವುದು’ ಎಂಬ ಆತಂಕದಿಂದ ಹೊರ ಬನ್ನಿ. ಮೊಬೈಲ್ ಬಳಕೆ ತಿಳಿದಿರುವ ನಿಮಗೆ ಕಂಪ್ಯೂಟರ್ ಬಳಕೆ ಕಷ್ಟವೇನಲ್ಲ. ಆಡಳಿತದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಹಾಗೂ ಪೇಪರ್ ರಹಿತ ಇ - ಆಡಳಿತವು ಎಲ್ಲೆಡೆ ಇರುವಾಗ ನೀವು ಹಿಂದೆ ಬೀಳುವುದು ಸರಿಯಲ್ಲ ತಾನೆ? ಈಗಲೇ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಂಡು ಪರೀಕ್ಷೆಯನ್ನು ಎದುರಿಸಿರಿ. ಯಶಸ್ಸು ನಿಮ್ಮದಾಗಲಿ.*

KSRTC contact numbers

ನೀವು ಕರ್ನಾಟಕದ ಯಾವುದೇ ಊರುಗಳಿಗೆ ಹೋಗ ಬೇಕಾದಲ್ಲಿ ಸರಕಾರಿ ಬಸ್ ನಿಲ್ದಾಣಗಳ ಸಂಪರ್ಕ ಸಂಖ್ಯೆಗಳನ್ನು ಬಳಸಿ ಯಾವ ಸಮಯಕ್ಕೆ ಬಸ್ ಹೊರಡುವುದು ಎಂದು ತಿಳಿಯುವ ಬಗ್ಗೆ ಒಂದು ಮಾಹಿತಿ:

1 ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ 7760990562
2 ಬೆಂಗಳೂರು ಮೈಸೂರು ರಸ್ತೆ ಬಸ್ ನಿಲ್ದಾಣ  7760990530
3 ಬೆಂಗಳೂರು ಶಾಂತಿನಗರ ಬಸ್ ನಿಲ್ದಾಣ  7760990531
4 ಭದ್ರಾವತಿ ಬಸ್ ನಿಲ್ದಾಣ 7760973105
5 ಚಿಕ್ಕಮಗಳೂರು ಬಸ್ ನಿಲ್ದಾಣ 7760990419
6 ಚಿತ್ರದುರ್ಗ ಬಸ್ ನಿಲ್ದಾಣ 8194222431, 8194220201
7 ದಾವಣಗೆರೆ ಬಸ್ ನಿಲ್ದಾಣ 7760973101
8 ಧರ್ಮಸ್ಥಳ ಬಸ್ ನಿಲ್ದಾಣ  7760106655
9 ಹಾಸನ ಬಸ್ ನಿಲ್ದಾಣ 7760990520
10 ಕೋಲಾರ ಬಸ್ ನಿಲ್ದಾಣ 7760990611
11 ಕುಂದಾಪುರ ಬಸ್ ನಿಲ್ದಾಣ 7760973162
12 ಮಂಡ್ಯ ಬಸ್ ನಿಲ್ದಾಣ 7760973058
13 ಮಂಗಳೂರು ಬಸ್ ನಿಲ್ದಾಣ 7760990720
14 ಮಡಿಕೇರಿ ಬಸ್ ನಿಲ್ದಾಣ 7760107788
15 ಮೈಸೂರು ಬಸ್ ನಿಲ್ದಾಣ 8212424995, 7760990821
16 ಪುತ್ತೂರು ಬಸ್ ನಿಲ್ದಾಣ  7760973152
17 ಸಾಗರ ಬಸ್ ನಿಲ್ದಾಣ 9916760327
18 ಶಿವಮೊಗ್ಗ ಬಸ್ ನಿಲ್ದಾಣ 9972288421
19 ತುಮಕೂರು ಬಸ್ ನಿಲ್ದಾಣ 9741495772
20 ಉಡುಪಿ ಬಸ್ ನಿಲ್ದಾಣ 9663266400
21 ಅಪ್ಝಲ್ ಪುರ ಬಸ್ ನಿಲ್ದಾಣ 7760973268
22 ಆಳಂದ ಬಸ್ ನಿಲ್ದಾಣ 7760973270
23 ಬಸವ ಕಲ್ಯಾಣ ಬಸ್ ನಿಲ್ದಾಣ 7760973310
24 ಬಸವನ ಬಾಗೇವಾಡಿ ಬಸ್ ನಿಲ್ದಾಣ 7760973294
25 ಬಳ್ಳಾರಿ ಹೊಸ ಬಸ್ ನಿಲ್ದಾಣ 7760973328
26 ಬಳ್ಳಾರಿ ಹಳೆ ಬಸ್ ನಿಲ್ದಾಣ 7760973329
27 ಭಾಲ್ಕಿ ಬಸ್ ನಿಲ್ದಾಣ 7760973311
28 ಬೀದರ್ ಬಸ್ ನಿಲ್ದಾಣ 7760973308
29 ಬಿಜಾಪುರ ಬಸ್ ನಿಲ್ದಾಣ 7760973278
30 ಚಿಂಚೋಳಿ ಬಸ್ ನಿಲ್ದಾಣ 7760973271
31 ಚಿತ್ತಾಪುರ ಬಸ್ ನಿಲ್ದಾಣ 7760973272
32 ದೇವದುರ್ಗ ಬಸ್ ನಿಲ್ದಾಣ 7760973303
33 ಗಂಗಾವತಿ ಬಸ್ ನಿಲ್ದಾಣ 7760973357
34 ಗುಲ್ಬರ್ಗಾ ಬಸ್ ನಿಲ್ದಾಣ 7760973267
35 ಹೊಸಪೇಟೆ ಬಸ್ ನಿಲ್ದಾಣ 7760973317
36 ಹುಮ್ನಾಬಾದ್ ಬಸ್ ನಿಲ್ದಾಣ 7760973309
37 ಇಂಡಿ ಬಸ್ ನಿಲ್ದಾಣ 7760973285
38 ಜೇವರ್ಗಿ ಬಸ್ ನಿಲ್ದಾಣ 7760973269
39 ಕೊಪ್ಪಳ ಬಸ್ ನಿಲ್ದಾಣ 7760973345
40 ಕೂಡ್ಲಿಗಿ ಬಸ್ ನಿಲ್ದಾಣ 7760973320
41 ಕುಷ್ಟಗಿ ಬಸ್ ನಿಲ್ದಾಣ 7760973346
42 ಲಿಂಗಸುಗೂರು ಬಸ್ ನಿಲ್ದಾಣ 7760973300
43 ಮಂತ್ರಾಲಯ ಬಸ್ ನಿಲ್ದಾಣ 7760973307
44 ರಾಯಚೂರು ಬಸ್ ನಿಲ್ದಾಣ 7760973299
45 ಸಂಡೂರು ಬಸ್ ನಿಲ್ದಾಣ 7760973323
46 ಶಹಾಪುರ ಬಸ್ ನಿಲ್ದಾಣ 7760973339
47 ಸಿಂಧಗಿ ಬಸ್ ನಿಲ್ದಾಣ 7760973288
48 ಸಿಂಧನೂರು ಬಸ್ ನಿಲ್ದಾಣ 7760973301
49 ಸಿರಗುಪ್ಪ ಬಸ್ ನಿಲ್ದಾಣ 7760973330
50 ಯಾದಗಿರಿ ಬಸ್ ನಿಲ್ದಾಣ 7760973333
51 ಬಾಗಲಕೋಟೆ ಬಸ್ ನಿಲ್ದಾಣ 7760991783
52 ಬೆಳಗಾವಿ ಕೇಂದ್ರ ಬಸ್ ನಿಲ್ದಾಣ  7760991635
53 ಭಟ್ಕಳ ಬಸ್ ನಿಲ್ದಾಣ 08385-226444
54 ಚಿಕ್ಕೋಡಿ ಬಸ್ ನಿಲ್ದಾಣ 08338-272143
55 ಧಾರವಾಡ ಹೊಸ ಬಸ್ ನಿಲ್ದಾಣ 0836-2221086
56 ಗದಗ ಬಸ್ ನಿಲ್ದಾಣ 7760991833
57 ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ  7760991682
58 ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ 7760991662
59 ಇಳಕಲ್ ಬಸ್ ನಿಲ್ದಾಣ 08351-270261
60 ಕಾರವಾರ ಬಸ್ ನಿಲ್ದಾಣ 7760973437, 08382-226315
61 ಕುಮಟಾ ಬಸ್ ನಿಲ್ದಾಣ 7760991730
62 ಶಿರಸಿ ಹೊಸ ಬಸ್ ನಿಲ್ದಾಣ 08384-229952
63 ಶಿರಸಿ ಹಳೆ ಬಸ್ ನಿಲ್ದಾಣ 08384-226380

How to move trees

Don't cut trees, just move them instead; this Hyderabad man shows you how   http://www.thenewsminute.com/article/dont-cut-trees-just-move-them-instead-hyderabad-man-shows-you-how-57746

Forest Fire SMS alert registration

Register with your mobile no and get instant alert about forest 🔥 fire from FSI

http://webline.co.in/smsalerts/index.php?logauth=success



ವ್ಯವಸ್ಥೆಗೆ ಕನ್ನಡಿ... ಈ ಕಿಡಿ

25 Feb, 2017

ಸಂಜಯ್ ಗುಬ್ಬಿ


ಈ ವರ್ಷದ ಕಾಡಿನ ಬೆಂಕಿ ಹಿಂದೆಂದಿಗಿಂತಲೂ ಬಹು ವಿಷಾದನೀಯ ಸನ್ನಿವೇಶದಲ್ಲಿ ಪ್ರಾರಂಭವಾಗಿದೆ. ಮುರುಗಪ್ಪ ತಮ್ಮನಗೋಳ ಎಂಬ ಅರಣ್ಯ ರಕ್ಷಕ ಬಂಡೀಪುರ ಅರಣ್ಯದ ಕಲ್ಕೆರೆ ವಲಯದಲ್ಲಿ ಬೆಂಕಿಗಾಹುತಿಯಾದರು. ಸುಟ್ಟ ಗಾಯಗಳಿಂದ ಕಾಡಿನಲ್ಲಿ ಬಿದ್ದಿದ್ದ ಅವರ ಕಳೇಬರದ ಚಿತ್ರಗಳು ನೋಡಲಾಗದಂತಿದ್ದವು. ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಪ್ರಸಂಗ ನಡೆದಿದೆ. ಈ ಘಟನೆ ನಮ್ಮ ಅರಣ್ಯಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಎದುರಿಸುವ ದಿನನಿತ್ಯದ ಕುತ್ತುಗಳನ್ನು ಎತ್ತಿ ತೋರುತ್ತದೆ. ಇಷ್ಟೆಲ್ಲಾ ತೊಂದರೆಗಳಿದ್ದರೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯತ್ತ ಸಮಾಜ ಹಾಗೂ ಸರ್ಕಾರದ ನಿಲುವು ಹೆಚ್ಚು ಬದಲಾಗುವುದು ಅನುಮಾನ.

ಕಾಡಿಗೆ ಬೆಂಕಿ ಬಿದ್ದಾಗ ಅರಣ್ಯ ಇಲಾಖೆಯನ್ನು ತೆಗಳುವುದು ಬಹು ಸಾಮಾನ್ಯ ಸಂಗತಿ. ಇಲಾಖೆ ಎದುರಿಸುವ ಸಮಸ್ಯೆಗಳತ್ತ ಗಮನ ಕೊಡುವವರು, ಆ ಬಗ್ಗೆ ಆಸಕ್ತಿ ವಹಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ, ಅರಣ್ಯ ವಿಶ್ರಾಂತಿಧಾಮದಲ್ಲಿ ಉಳಿಯಲು ಬಯಸುವವರು, ಅರಣ್ಯದೊಳಗೆ ಸಫಾರಿ ಹೋಗಲು, ಛಾಯಾಚಿತ್ರ ತೆಗೆಯಲು, ಮೋಜು ಮಸ್ತಿ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯ ಕೇಳಿ ಬರುವವರು ಸಾವಿರಾರು ಜನ.

ರಾಜ್ಯದ ಬಹುತೇಕ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಶೇಕಡ ಐವತ್ತರಷ್ಟು ಹುದ್ದೆಗಳು ಖಾಲಿ ಇವೆ. ‘ಹೀಗಿದ್ದಾಗ ಬೆಂಕಿಯನ್ನು ನಿರ್ವಹಿಸುವುದಾದರೂ ಹೇಗೆ’ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡ ಅರಣ್ಯ ಇಲಾಖೆ ಮುಖ್ಯಸ್ಥರ ಗೋಳಿನಲ್ಲಿ ಅರ್ಥವಿದೆ. ಇರುವ ಬೆರಳೆಣಿಕೆಯ ಕಾಯಂ ಸಿಬ್ಬಂದಿಯೊಡನೆ ಕೈಜೋಡಿಸುವವರೆಂದರೆ, ಕಾಳ್ಗಿಚ್ಚಿನ  ಕಾಲದಲ್ಲಿ ಹಂಗಾಮಿಯಾಗಿ ಕೆಲಸಕ್ಕೆ ಸೇರಿಸಿಕೊಳ್ಳುವ ಕಾಡು ಕುರುಬರು  ಮತ್ತಿತರ ಕೆಲ ಬುಡಕಟ್ಟು ಜನಾಂಗದವರು. ಬೆಂಕಿ ನಂದಿಸುವುದು ಸುಲಭದ ಕೆಲಸವೇನಲ್ಲ. ಬಿಸಿಲಿನ ತಾಪ, ಉರಿಯುವ ಬೆಂಕಿ, ಹಸಿ ಸೊಪ್ಪು ಹಿಡಿದು ಆ ಬೆಂಕಿಯನ್ನು ಬಡಿದೂ ಬಡಿದೂ ಎರಡೂ ಹಸ್ತಗಳಲ್ಲಿ ಕಾಣಿಸಿಕೊಳ್ಳುವ ಉರಿಯುವ ಬೊಬ್ಬೆಗಳು, ಕುಡಿಯಲು ಸಹ ನೀರಿಲ್ಲದಿರುವುದು, ಇವೆಲ್ಲ ಬೆಂಕಿ ನಂದಿಸುವುದು ಯಾವ ಶತ್ರುವಿಗೂ ಬೇಡದ ಕಾರ್ಯ ಎನಿಸುವಂತೆ ಮಾಡುತ್ತವೆ. ಹೀಗಾಗಿ ಹಂಗಾಮಿ ನೌಕರರನ್ನು ಕೆಲಸಕ್ಕೆ ಕರೆತರುವುದು ಸಹ ಬಹು ಕಷ್ಟದ ಕೆಲಸವಾಗುತ್ತಿದೆ. ಅವರು ಕೆಲಸಕ್ಕೆ ಬಂದರೂ ದುರದೃಷ್ಟವಶಾತ್ ಏನಾದರೂ ಅವಘಡಗಳಾದರೆ ಅವರಿಗೆ  ವಿಮೆ ಅಥವಾ ಇತರ ಯಾವುದೇ ಸೌಲಭ್ಯಗಳಿಲ್ಲ. ಬಂಡೀಪುರದಲ್ಲಿ ಇತ್ತೀಚೆಗೆ ಕಾಳ್ಗಿಚ್ಚಿನಿಂದ ತೀವ್ರವಾಗಿ ಗಾಯಗೊಂಡ ಮೂವರು ಸಿಬ್ಬಂದಿಯಲ್ಲಿ ಇಬ್ಬರು ಹಂಗಾಮಿ ನೌಕರರಾಗಿದ್ದು, ಕಾಡು ಕುರುಬ ಜನಾಂಗಕ್ಕೆ ಸೇರಿದ ಯುವಕರು. ಇವರಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ದಿನಗಳಲ್ಲಿ ಬೇಕಾಗುವ ಔಷಧಿ, ಚಿಕಿತ್ಸೆಗೆ ತಗಲುವ ವೆಚ್ಚದ ಜವಾಬ್ದಾರಿ ಯಾರದು? ಅವರು ಗುಣಮುಖರಾಗಿ ಕೆಲಸಕ್ಕೆ ಹೋಗುವವರೆಗೂ ಅವರ ಕುಟುಂಬದ ಜವಾಬ್ದಾರಿ ಯಾರದು? ಇದಕ್ಕೆಲ್ಲ ಸ್ಪಷ್ಟ ಉತ್ತರವಿಲ್ಲ.

ಇನ್ನು ಕಾಯಂ ನೌಕರರ ಪರಿಸ್ಥಿತಿ ಸಹ ಕಷ್ಟಕರವಾದುದು. ವನ್ಯಜೀವಿ ವಿಭಾಗಗಳಲ್ಲಿ ಕೆಲಸ ಮಾಡಲು ಸ್ವಇಚ್ಛೆಯಿಂದ ಬರುವವರು ಕಡಿಮೆ. ಇರುವವರಿಗೆ ಸರಿಯಾದ ಸೌಲಭ್ಯಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಹೊಸ ನಿಯಮವೊಂದನ್ನು ತರಲಾಗಿದೆ. ಅರಣ್ಯ ವೀಕ್ಷಕ, ಅರಣ್ಯ ರಕ್ಷಕ ಮತ್ತು ಉಪ ಅರಣ್ಯ ವಲಯಾಧಿಕಾರಿಗಳು ಒಂದು ಅರಣ್ಯ ವೃತ್ತದಿಂದ ಇನ್ನೊಂದು ವೃತ್ತಕ್ಕೆ ವರ್ಗಾವಣೆಯಾದರೆ ಅವರ ಸೇವಾ ಹಿರಿತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ, ಹೊಸದಾಗಿ ಸೇರಿದ ಹಲವಾರು ಸಿಬ್ಬಂದಿ ಐದು ವರ್ಷದ ಕಡ್ಡಾಯ ವನ್ಯಜೀವಿ ವಿಭಾಗ ಸೇವೆಯ ನಂತರ ಇತರ ವೃತ್ತಗಳಿಗೆ ಹೋಗುವುದು ಅಸಾಧ್ಯವಾಗಿದೆ. ಮೃತಪಟ್ಟ ಮುರುಗಪ್ಪ ತಮ್ಮನಗೋಳ  ಅವರೂ ಇದೇ ಕಾರಣದಿಂದ ಬಂಡೀಪುರದಲ್ಲಿ ಉಳಿದುಕೊಂಡಿದ್ದುದು. ಈ ನಿಯಮ ಬದಲಾಗಬೇಕು ಮತ್ತು ರಾಜ್ಯ ಮಟ್ಟದಲ್ಲಿ ಒಂದೇ ಸೇವಾ ಹಿರಿತನದ ಪಟ್ಟಿಯಾಗಬೇಕು ಎಂಬುದು ಅರಣ್ಯ ಸಿಬ್ಬಂದಿಯ ಅಭಿಪ್ರಾಯ. ವನ್ಯಜೀವಿ ವಿಭಾಗದಲ್ಲಿ ದೀರ್ಘಾವಧಿ ಕಾರ್ಯ ನಿರ್ವಹಿಸುವುದು ಬಹು ಕಷ್ಟದ ವಿಚಾರ. ಮೂರ್ನಾಲ್ಕು ವರ್ಷಗಳಾದ ನಂತರ ಇತರ ಪ್ರದೇಶಗಳಲ್ಲಿ ಕೆಲಸ ಮಾಡಿದರೆ ಸಿಬ್ಬಂದಿ ಸ್ವಲ್ಪವಾದರೂ ಚೇತರಿಸಿಕೊಳ್ಳಬಹುದು.

ಕಾಳ್ಗಿಚ್ಚಿನ ಸಂದರ್ಭದಲ್ಲಿ ನೆರವಿಗೆ ಬರುವಂತೆ ಕೆಲ ಕನಿಷ್ಠ ಸೌಲಭ್ಯಗಳು ಹಾಗೂ  ಮಾಹಿತಿಯನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು. ತುರ್ತುಪರಿಸ್ಥಿತಿಯಲ್ಲಿ ಕಾಡಿನ ಸುತ್ತಮುತ್ತ ಎಲ್ಲೆಲ್ಲಿ ದೊಡ್ಡ ಮಟ್ಟದಲ್ಲಿ ನೀರು ಒದಗಿಸುವ ರೈತರಿದ್ದಾರೆ, ಕೊಳವೆ ಬಾವಿಗಳೆಲ್ಲಿವೆ, ಕಾಡಿಗೆ ಬೆಂಕಿ ಹಾಕುವ ಅಭ್ಯಾಸವಿರುವ ವ್ಯಕ್ತಿಗಳ್ಯಾರು, ತುರ್ತುಪರಿಸ್ಥಿತಿ ಬಂದಾಗ ಯಾವ ಸಾಮಾಜಿಕ ನಾಯಕರ ಸಹಾಯ ತೆಗೆದುಕೊಳ್ಳಬಹುದು ಎಂಬಂತಹ  ಮಾಹಿತಿಯನ್ನು ಕ್ರೋಡೀಕರಿಸಿ ಇಟ್ಟುಕೊಳ್ಳಬೇಕು. ಈ ಮಾಹಿತಿ ಮತ್ತು ತಿಳಿವಳಿಕೆ ಮುಂಬರುವ ಅಧಿಕಾರಿಗಳಿಗೂ ಹಸ್ತಾಂತರವಾಗಬೇಕು. ಇಲ್ಲವಾದಲ್ಲಿ ಸ್ಥಳ ಮತ್ತು ಜನ ಪರಿಚಯವಿಲ್ಲದ ಅಧಿಕಾರಿಗಳು ಪ್ರತಿ ಎರಡು, ಮೂರು ವರ್ಷಗಳಿಗೊಮ್ಮೆ ವರ್ಗವಾಗಿ ಬಂದಾಗ, ಅವರು ಕಾರ್ಯವನ್ನು ಸಂಪೂರ್ಣ ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಹಿಂದಿನ ಅಧಿಕಾರಿಗಳ ಅನುಭವ, ಕಾರ್ಯನೀತಿ, ರೂಪುರೇಷೆ, ಸಂಘಟನಾ ನಕ್ಷೆಗಳೆಲ್ಲ ನದಿಯಲ್ಲಿ ಹುಣಿಸೆ ಹಣ್ಣು ತೊಳೆದಂತಾಗುತ್ತವೆ. ಹಾಗೆಯೇ ಮುಖ್ಯವಾದ ಮತ್ತು ಸೂಕ್ಷ್ಮವಾದ ಪ್ರದೇಶಗಳಿಗೆ ಅನುಭವಸ್ಥರು, ಸ್ಥಳೀಯ ಜನ ಹಾಗೂ ಮುಂಚೂಣಿ ಸಿಬ್ಬಂದಿಯೊಡನೆ ಉತ್ತಮ ಬಾಂಧವ್ಯ ಹೊಂದಿರುವವರನ್ನು ನಿಯೋಜಿಸುವುದು ಬಹುಮುಖ್ಯ. ಹುಲಿ ಯೋಜನಾ ಪ್ರದೇಶಗಳಲ್ಲಿರುವ ಹುಲಿ ಪ್ರತಿಷ್ಠಾನದ ಹಣವನ್ನು ಬೆಂಕಿ ನಿರೋಧಕ ಸಮವಸ್ತ್ರ, ಎಲ್ಲಾ ಬಗೆಯ  ನೆಲಹರವುಗಳಲ್ಲೂ ತೆರಳಬಲ್ಲ ಬೆಂಕಿ ತಡೆ ವಾಹನ ಹಾಗೂ ಇತರ ಸಲಕರಣೆಗಳನ್ನು ಖರೀದಿಸಲು ವಿನಿಯೋಗಿಸಬಹುದು.

ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯನ್ನು ಸೇರುತ್ತಿರುವ ಯುವಕರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದವರು. ದುಡಿಯುವ ಛಲವಿರುವವರು. ಆದರೆ, ಅವರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಅವರು ತರಬೇತಿ ಸಮಯದಲ್ಲಿ ಹೆಚ್ಚಾಗಿ, ಪುಸ್ತಕದಲ್ಲಿರುವ ಸಿದ್ಧಾಂತ ಮತ್ತು ನಿಯಮಗಳನ್ನು ಕಲಿಯುತ್ತಾರೆ. ಇದರ ಜೊತೆಗೆ ಬೆಂಕಿ ನಿರ್ವಹಣೆ ಹಾಗೂ ತಡೆಯ ಬಗ್ಗೆ ಕ್ರಿಯಾಶೀಲ, ಪ್ರಾಯೋಗಿಕ ತರಬೇತಿ ಕಡೆಗೆ ಒತ್ತು ನೀಡುವುದು ಅತ್ಯವಶ್ಯಕ. ಕಾಡಿನ ಬೆಂಕಿಯ ಬಗ್ಗೆ ಹಲವರಿಗೆ ಅರಿವೇ ಇರುವುದಿಲ್ಲ. ಅವರಿಗೆ ಇಂತಹ ಬೃಹದಾಕಾರದ ಬೆಂಕಿಯನ್ನು ನಿರ್ವಹಿಸಿ ಎನ್ನುವುದು, ವ್ಯಕ್ತಿಯೊಬ್ಬನನ್ನು  ದಷ್ಟಪುಷ್ಟವಾಗಿದ್ದಾನೆಂಬ ಕಾರಣಕ್ಕೆ ತರಬೇತಿಯಿಲ್ಲದೆ ಕುಸ್ತಿಯ ಅಖಾಡಕ್ಕೆ ಇಳಿಸಿದಂತೆ.


ಧಾರವಾಡದ ಗುಂಗರಘಟ್ಟಿ ಅರಣ್ಯ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಈ ನಿಟ್ಟಿನಲ್ಲಿ ಸ್ವಲ್ಪ ಕಾರ್ಯ ಮುಂದುವರಿದಿರುವುದು ಶ್ಲಾಘನೀಯ. ರಾಜ್ಯದಲ್ಲಿರುವ ಅರಣ್ಯ ತರಬೇತಿ ಸಂಸ್ಥೆಗಳಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅಭಿರುಚಿ ಹುಟ್ಟಿಸುವ, ಕುತೂಹಲ ಕೆರಳಿಸುವ ಪ್ರಾಧ್ಯಾಪಕರಿರಬೇಕು. ಈ ನಿಟ್ಟಿನಲ್ಲಿ ಅತೀ ಹೆಚ್ಚು ಗಮನ ನೀಡಬೇಕಾಗಿದೆ. ಇದರೊಡನೆ, ಕಾಳ್ಗಿಚ್ಚಿನ ಸಂದರ್ಭಗಳನ್ನು ನಿಭಾಯಿಸುವ ಕವಾಯತನ್ನು  ನಿಯಮಿತವಾಗಿ ಮಾಡುವುದು ಕಡ್ಡಾಯವಾಗಬೇಕು. ಇದನ್ನು ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಗಳು ನಿಯಮಿತವಾಗಿ ಕೈಗೊಳ್ಳುತ್ತವೆ. ಜೊತೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತವೆ. ಈ ತರಬೇತಿ ಅರಣ್ಯ ಇಲಾಖೆ ಸಿಬ್ಬಂದಿಗೆ ಬಹು ಉಪಯೋಗಿಯಾಗಬಹುದು. ದುರಂತ, ತುರ್ತು ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕಾರ್ಯ ಸುಲಭವಾಗಬಹುದು.


ಕಾಡಿಗೆ ಬೆಂಕಿ ಬೀಳುವುದರ ಕಾರಣ ಎಲ್ಲರಿಗೂ ತಿಳಿದದ್ದೆ. ನಮ್ಮ ರಾಜ್ಯದಲ್ಲಂತೂ ಬೆಂಕಿ ಬೀಳುವುದು ನೂರಕ್ಕೆ ನೂರರಷ್ಟು ಮಾನವರಿಂದಲೇ. ಇದನ್ನು ತಡೆಗಟ್ಟಲು  ಕಾಡಿನ ಸುತ್ತಮುತ್ತಲಿರುವ ಜನರೊಡನೆ ನಮ್ಮ ಬಾಂಧವ್ಯ ಉತ್ತಮಗೊಳಿಸಿಕೊಳ್ಳುವುದು ಬಹು ಅವಶ್ಯಕ. ಆದರೆ ಕಿಡಿಗೇಡಿಗಳಿದ್ದರೆ ಅವರನ್ನು ಕಾನೂನಿನ ಪ್ರಕಾರವೇ ನಿಭಾಯಿಸಬೇಕಾಗುತ್ತದೆ. ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಾಡಿನ ಸುತ್ತಮುತ್ತಲಿರುವ ಹಿರಿಯರು, ಪ್ರಭಾವಿ ಸಾಮಾಜಿಕ ನಾಯಕರು, ಹೀಗೆ ಎಲ್ಲರ ಪಾತ್ರವೂ ಕಾಡು ಹಾಗೂ ಅರಣ್ಯ ಇಲಾಖೆ ಬಾಂಧವ್ಯ ಸುಧಾರಿಸಲು ನೆರವಾಗುವಂತೆ ಇರಬೇಕು. ಬೆಂಕಿ ಹಾಕಿದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದರೆ ಸಾಮಾಜಿಕ ನಾಯಕರು ಅವರ ಬೆಂಬಲಕ್ಕೆ ನಿಲ್ಲುವುದು ತಪ್ಪಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕೆಲ ಅಧಿಕಾರಿಗಳಲ್ಲಿ, ‘ನಮ್ಮ ನೈಸರ್ಗಿಕ ಸಂಪತ್ತನ್ನು ಉಳಿಸಲು ಯಾರ ಬೆಂಬಲವೂ ಬೇಕಿಲ್ಲ. ನಮ್ಮಲ್ಲಿ ಸಾಕಷ್ಟು ಹಣವಿದೆ. ಎಲ್ಲರೂ ಆಚೆಯಿದ್ದರೆ ಸಾಕು’ ಎನ್ನುವ ಭಾವನೆಯಿದೆ. ಹಣದಿಂದಷ್ಟೇ ಸಂಬಂಧಗಳು ಉತ್ತಮಗೊಳ್ಳುವುದಿಲ್ಲ, ವನ್ಯಸಂಪತ್ತು ಉಳಿಯುವುದಿಲ್ಲ. ಸಂಬಂಧಪಟ್ಟವರೆಲ್ಲರೂ  ಕೈಗೂಡಿಸಿದರೆ ಅಸಾಧ್ಯವಾದುದನ್ನು ಸಾಧ್ಯ ಮಾಡಬಹುದು.

ಕಾಡಿನ ಬೆಂಕಿ, ವನ್ಯಜೀವಿ ಸಂಘರ್ಷ, ವನ್ಯಜೀವಿಗಳು ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಬಂದರೆ ಕೇವಲ ಟೀಕಿಸುವ ತಜ್ಞರಲ್ಲಿ ಎಷ್ಟು ಮಂದಿಗೆ ಈ ವಿಷಯಗಳ ನಿರ್ವಹಣೆಯಲ್ಲಿ ಪ್ರಾಯೋಗಿಕವಾದ ಅನುಭವವಿದೆಯೆಂದರೆ, ಅದು ಖಂಡಿತ ಸೊನ್ನೆ. ಕಾಳ್ಗಿಚ್ಚಿನ  ಕಾಲ ಬಂದರೆ ಇಂತಹವರು ಮಾಧ್ಯಮಗಳ ಮೂಲಕ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರುವುದನ್ನು ಕಡಿಮೆ ಮಾಡಬೇಕು. ಈ ರೀತಿಯ ಒತ್ತಡದಲ್ಲಿ ಸಿಬ್ಬಂದಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಗರಗಳಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳು ಹಾಗೂ  ಮಾಧ್ಯಮಗಳ ಮೂಲಕ ಟೀಕಿಸುವುದಕ್ಕೆ ಸಮಯ ವ್ಯರ್ಥ ಮಾಡುವ ಬದಲು ಅರಣ್ಯ ಇಲಾಖೆಯೊಡನೆ ಕೈಜೋಡಿಸುವುದು ಉತ್ತಮ.

ಕಾಡಿನ ಬೆಂಕಿಯಲ್ಲಿ ಒಬ್ಬರ ತಪ್ಪಿರುತ್ತದೆ ಎಂದು ಹೇಳುವುದು ಅಥವಾ ಒಬ್ಬರನ್ನೇ ದೂರುವುದು ಬಹು ಕಷ್ಟ. ಇದೊಂದು ವ್ಯವಸ್ಥೆಯ ವೈಫಲ್ಯ. ವ್ಯವಸ್ಥೆಯಲ್ಲಿರುವ ಹಲವು ವಿಚಾರಗಳು ಬದಲಾಗುವವರೆಗೂ ಈ ಅವಘಡಗಳು ತಪ್ಪುವುದು ಅನುಮಾನ. ಆದರೆ ಇಷ್ಟೆಲ್ಲಾ ತೊಂದರೆ, ಇತಿಮಿತಿಗಳ ಮಧ್ಯೆಯೂ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಕೆಲಸ ನಿರ್ವಹಿಸುತ್ತಿರುವ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿಗೆ ಸಲಾಂ ಹೇಳೋಣ.

ಬೆಂಕಿಗೆ ತುಪ್ಪ ಸುರಿಯುವವರು

2012ರ ಬೇಸಿಗೆ. ರಾಜ್ಯದ ಹಲವೆಡೆ ಕಾಡುಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ರಾಜ್ಯದ ಖ್ಯಾತ ಹುಲಿ ತಜ್ಞರೊಬ್ಬರು, ನಾಗರಹೊಳೆಯಲ್ಲಿ ಸುಮಾರು 9,700 ಎಕರೆ ಕಾಡು ಸುಟ್ಟು ಕರಕಲಾಗಿದೆಯೆಂದು ಪತ್ರಿಕೆಗಳಿಗೆ ಹೇಳಿಕೆ ನೀಡಿ ಬೆಂಕಿಗೆ ತುಪ್ಪ ಸುರಿದರು. ಒಂದೇ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಹೆಚ್ಚೂಕಡಿಮೆ ಹತ್ತು ಸಾವಿರ ಎಕರೆ ಕಾಡು ಸುಟ್ಟಿದೆಯೆಂದರೆ ಚಿಕ್ಕ ವಿಷಯವೇ? ಎಲ್ಲೆಡೆ ಅಲ್ಲೋಲಕಲ್ಲೋಲ. ಮತ್ತದೇ, ಅರಣ್ಯ ಇಲಾಖೆಗೆ ಎಲ್ಲರಿಂದಲೂ ವ್ಯಾಪಕ ಬೈಗುಳ.


ನಂತರ ನಡೆದ ವೈಜ್ಞಾನಿಕ ಅಧ್ಯಯನದಿಂದ, ವಾಸ್ತವವಾಗಿ ನಾಗರಹೊಳೆಯಲ್ಲಿ ಸುಮಾರು 5,100 ಎಕರೆಯಷ್ಟು ಕಾಡು ಸುಟ್ಟು ಹೋಗಿದ್ದ ವಿಷಯ ಪತ್ತೆಯಾಯಿತು. ತಜ್ಞರು ಅದನ್ನು ಎರಡರಷ್ಟು ಮಾಡಿ ಪ್ರಚಾರ ಗಿಟ್ಟಿಸಿಕೊಂಡುಬಿಟ್ಟಿದ್ದರು. ಕಾಡು ಎಷ್ಟೇ ಪ್ರಮಾಣದಲ್ಲಿ ಸುಟ್ಟರೂ ಅದು ನಷ್ಟವೇ, ಅದು ತಪ್ಪೇ. ಆದರೆ ವಾಸ್ತವಾಂಶವನ್ನು ಬಿಟ್ಟು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ, ಅರಣ್ಯ ಇಲಾಖೆ ಹಾಗೂ ಅದರ ಸಿಬ್ಬಂದಿ ವಿರುದ್ಧ ಅವರನ್ನು ಎತ್ತಿಕಟ್ಟುವುದು ಎಷ್ಟು ಸಮಂಜಸ? ಸುಳ್ಳು ಮಾಹಿತಿ ನೀಡಿ ಕೋಮು ಗಲಭೆ ಉಂಟು ಮಾಡಿಸಿದಷ್ಟೇ ಕೆಟ್ಟ ಕೆಲಸ ಇದು. ಇಂತಹವರು ಹೇಳುವ ಸುಳ್ಳುಗಳಿಗೆ ಶಿಕ್ಷೆಯೇನು?

VERY SIMPLE WAYS TO ALKALIZE YOUR BODY–!

HEALTHY TIPS VERY SIMPLE WAYS TO ALKALIZE YOUR BODY– AMAZING EFFECTS! BY WORLDHEALTHCHOICE · Practice every day these natural and sim...