Monday 2 January 2017

Forest slogans

ವನ್ಯಜೀವಿ ಗಣ್ಯಜೀವಿ

ಕಾಡಿದ್ದರೆ ನಾವಿಲ್ಲಿ.. ಕಾಡಿಲ್ಲದಿರೆ ನಾವೆಲ್ಲಿ..

ಸತ್ತವರ ಮೇಲೆ ಕಲ್ಲಿನ ಕಟ್ಟೆಯ ಕಟ್ಟಬೇಡ, ಗಿಡ ನೆಟ್ಟು ಪಾತಿಯ ಕಟ್ಟು.

ಈ ನೆಲ….ಈ ಜಲ…..ಈ ಮಣ್ಣು
ಇರಲಿ ಇರಲಿ ಹೀಗೆ..ಈ ಪ್ರಕೃತಿ ಕೊಟ್ಟ ಕೊಡುಗೆ..

ನಿಮ್ಮ ಮಗುವಿನ ಭವಿಷ್ಯ…ಮರಗಳಲ್ಲಿದೆ.

ಕಡಿದರೆ ಮರ, ಬರುವುದು ಬರ.

ನಿನ್ನ ಉಸಿರು, ನನ್ನ ಹಸಿರಲ್ಲಿದೆ.

ಸತ್ತವರಿಗೆ ಜೀವ ತುಂಬಬೇಕೆ, ಸಮಾದಿ  ಮೇಲೋಂದು ಗಿಡ ನೆಡಿ.

ಮರ ಬೆಳಸಿ, ಜೀವ ಉಳಿಸಿ.

“ಅದು, ಇದು ಗಿಪ್ಟ್ ಬೇಡ
ಗಿಡಕೊಟ್ಟು, ವಿಷ್ ಮಾಡಿ..

ಅರಣ್ಯ ನಾಶವಾದರೆ ದೇಶಕ್ಕೆ ಅಪಾಯ.’

ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.

ಪ್ರತಿ ದಿನವೂ ವಿಶ್ವಪರಿಸರ ದಿನವಾಗಲಿ.

ಅರಣ್ಯ ನಾಶ, ದೇಶ ವಿನಾಶ.

ಕಾಡು ಬೆಳಸಿ, ನಾಡು ಉಳಿಸಿ.

ಪರಿಸರ ಸಂರಕ್ಷಣೆ, ನಮ್ಮೆಲ್ಲರ ಹೊಣೆ.

“ನಿಮ್ಮ ವಂಶ ಬೆಳಗಲು ಮಗನನ್ನು ಬೆಳಸು.
ಮಗನ ವಂಶ ಬೆಳಗಲು ಮರಗಳನ್ನು ಬೆಳಸು.

ಸತ್ತವರ ಮೇಲೊಂದು ಗಿಡ ನೆಡಿ
ಸತ್ತವರು ಮತ್ತೆ ಹುಟ್ಟುತ್ತಾರೆ.

ಕಡಿಮೆ ಖರ್ಚಿನಲ್ಲಿ ಎಸಿ, ಪ್ಯಾನು ಬೇಕೆ…
ಎರಡು ವರ್ಷ ಗಿಡಮರ  ಬೆಳಸಿ ನೋಡು.

ನಾನೊಂದು ಬಗೆದರೆ, ಮರವೊಂದು ಬಗೆಯುತ್ತದೆ.
ನಿಮ್ಮ ಮಕ್ಕಳಿಗೆ ಮರ ಬೆಳೆಸುವ ಪಾಠ ಹೇಳಿ

ಮಳೆ ಬೀಜಕ್ಕಾಗಿ, ಮರ ಬೆಳಸಿ.

ಏ ಕೇಡಿನ ಮನುಷ್ಯ ನೋಡು ನನ್ನಿಂದ ಬೇಸಿಗೆ, ಮಳೆ, ಚಳಿಗಾಲ ಬದಲಾಗುತ್ತಿದೆ.-ಮರ

ನಿಮ್ಮ ಮಕ್ಕಳಿಗೆ ಅರಣ್ಯ ಸಂರಕ್ಷಣೆಯ ಪ್ರಬಂಧ ಬರೆಸಬೇಡಿ,
ಮರ ಬೆಳೆಸುವ ಪರಿಯ ತಿದ್ದಿ ತೀಡಿ.


No comments:

Post a Comment

VERY SIMPLE WAYS TO ALKALIZE YOUR BODY–!

HEALTHY TIPS VERY SIMPLE WAYS TO ALKALIZE YOUR BODY– AMAZING EFFECTS! BY WORLDHEALTHCHOICE · Practice every day these natural and sim...