Monday 9 January 2017

NPS

Demoes: How to check Nps statement , reset I-PIN, NPS Calculater

*ಆತ್ಮೀಯ NPS ನೌಕರ ಬಾಂಧವರೆ, ನೀವು ಈ ಕೆಳಗಿನ ವಿಡಿಯೋಗಳನ್ನು ನೋಡಿ ನಮ್ಮ NPS A/C ನ I-PIN ನ್ನು ಹೇಗೆ Reset ಮಾಡಬಹುದು ಹಾಗೂ ಬಳಸುವ ವಿಧಾನವನ್ನು ವೀಕ್ಷಣೆ ಮಾಡಿ ನೀವೂ ಪ್ರಯತ್ನಿಸಿ.*

1) https://youtu.be/XfiDMEXVWe4

2) https://youtu.be/TAsiFQFHYks

3) https://youtu.be/ZSrr1spNvE0

4)https://youtu.be/8uJivlCTqlo

5)https://youtu.be/bdGSQ5PwWq8


Demo PPT: RESET I-PIN
https://npscra.nsdl.co.in/download.php?path=download/&filename=IPIN_Reset.ppsx>

Withdrawal Process for Government Subscriber - Demo:

Click below link and see the demo.
https://npscra.nsdl.co.in/download.php?path=download/&filename=Withdrawal_Process_for_Government_Subscriber_Demo.ppsx
          ಕೃಪೆ: youtube







*ಅಂತರ್ಜಾಲದಲ್ಲಿ ಪಿಂಚಣಿ ಪ್ರಕ್ರಿಯೆ ವಿವರ ಕಡ್ಡಾಯ*💐

*MAHANTAGOUD.T.PATIL.SWCM.KSPSTA*

*ಈ ಕ್ರಮದಿಂದ ನೌಕರರಿಗೆ ನಿವೃತ್ತಿ ಬಳಿಕ ಪಿಂಚಣಿಯು ಸೂಕ್ತ ಸಮಯಕ್ಕೆ ದೊರಕುವುದು ಸಾಧ್ಯವಾಗಲಿದೆ.*

*ಪಿಂಚಣಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಗಳನ್ನೂ ಸಂಬಂಧಿಸಿದ ವೆಬ್‌ ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯ ದರ್ಶಿಗಳಿಗೆ ಸೂಚನೆ ನೀಡಿದೆ.*

*ವಿವರಣಾತ್ಮಕ ಮಾರ್ಗಸೂಚಿ ಮತ್ತು ನಿರ್ದೇಶನಗಳಿದ್ದರೂ ಬೃಹತ್‌ ಸಂಖ್ಯೆಯ ನೌಕರರಿಗೆ ನಿವೃತ್ತಿ ಪ್ರಯೋಜನಗಳು ಮತ್ತು ಪಿಂಚಣಿ (ಪಿಪಿಒ) ಸೂಕ್ತ ಸಮಯಕ್ಕೆ ದೊರಕುತ್ತಿಲ್ಲ ಎಂದು ಸಚಿ ವಾ ಲಯ ಅಸಮಾಧಾನ ವ್ಯಕ್ತಪಡಿಸಿದೆ.ಮಹಾಂತಗೌಡ.ಟಿ.ಪಾಟೀಲ*

*ನೌಕರರಿಗೆ ನಿವೃತ್ತಿ ಪ್ರಯೋಜನ ಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ‘ಭವಿಷ್ಯ’ ಎಂಬ ಅಂತರ್ಜಾಲ ಅಸ್ತಿತ್ವದ ಲ್ಲಿದೆ. ಈ ವ್ಯವಸ್ಥೆಯ ಮೂಲಕ ಪಿಂಚಣಿ ಪ್ರಕರಣದ ಪ್ರತಿ ಹಂತದ ಪ್ರಕ್ರಿಯೆಯನ್ನು ಎಲ್ಲ ಆಡಳಿತಾಧಿಕಾರಿಗಳು ಮತ್ತು ನಿವೃತ್ತ ನೌಕರರೂ ಪರಿಶೀಲನೆ ಮಾಡಬಹುದು ಎಂದು ಅದು ಹೇಳಿದೆ.*

*ಎಲ್ಲ ಮುಖ್ಯ ಕಚೇರಿಗಳೂ ಪಿಂಚಣಿ ಯೋಜನೆಗಳ ಪ್ರಕ್ರಿಯೆಗಳನ್ನು ‘ಭವಿಷ್ಯ’ದ ಮೂಲಕ ಮಾತ್ರವೇ ನಡೆಸು ವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ನಿವೃತ್ತಿಯಾಗಲಿರುವ ನೌಕರರಿಗೆ ಅಂತರ್ಜಾಲ ಅರ್ಜಿಯನ್ನು ಸಲ್ಲಿಸುವಂತೆ ಇಲ್ಲಿ ಅಗತ್ಯಬಿದ್ದಲ್ಲಿ ಸೂಚಿಸ ಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.*

*ನಿವೃತ್ತರಾಗಲಿರುವ ನೌಕರರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಜನವರಿ 1ರಿಂದ ಅಂತರ್ಜಾಲದಲ್ಲಿ ದಾಖಲಿಸಬೇಕು ಮತ್ತು ‘ಭವಿಷ್ಯ’ದ ಮೂಲಕ ಯಾವುದೇ ಪಿಂಚಣಿ ಪ್ರಕರಣದಲ್ಲಿ ವಿಳಂಬವಾಗಬಾರದು ಎಂದು ನಿರ್ದೇಶಿಸಿದೆ.* *.MAHANTAGOUD.T.PATIL.SWCM.KSPSTA*💐💐👏🏾

No comments:

Post a Comment

VERY SIMPLE WAYS TO ALKALIZE YOUR BODY–!

HEALTHY TIPS VERY SIMPLE WAYS TO ALKALIZE YOUR BODY– AMAZING EFFECTS! BY WORLDHEALTHCHOICE · Practice every day these natural and sim...